Welcome to the official website of Karnataka Rheumatology Association (KRA)
ಕರ್ನಾಟಕ ರುಮಾಟಾಲಜಿ ಅಸೋಸಿಯೇಷನ್ ನ ಅಧಿಕೃತ ಜಲತಾಣಕ್ಕೆ ಸುಸ್ವಾಗತ

What is Arthritis? - Kannada

  • kraIndiaRheu2018
  • No Comments

What is Arthritis? – Kannada

ಸಂಧಿವಾತದ ಪ್ರಭೇದಗಳು

1. ಅರ್ಥ್ಯರೇಟಿಸ್‌ ಮತ್ತು ರೂಮ್ಯಾಟಿಸಂ ಎಂದರೇನು?
ಅರ್ಥ್ಯರೇಟಿಸ್‌ ಮತ್ತು ರೂಮ್ಯಾಟಿಸ೦ ಬಗ್ಗೆ ಜನರಲ್ಲಿ ಸರಿಯಾದ ತಿಳುವಳಿಕೆ ಇಲ್ಲ. ಅರ್ಥೈರೇಟಿಸ್‌ ಎ೦ದರೆ ಕೀಲು ನೋವು ಹಾಗೂ ಜೊತೆಗೆ ಕೀಲುಗಳಲ್ಲಿ ಊತ ಉಂಟಾಗುವುದು. ರೂಮ್ಯಾಟಸಂ ಎಂದರೆ ಕೀಲು ನೋವು, ಎಲುಬು ಮತ್ತು ಮಾಂಸ – ಖಂಡಗಳಲ್ಲಿ ಬರುವಂತಹ ನೋವು, ಈ ಎಲ್ಲ ತರಹದ ನೋವುಗಳಿಗೆ ವೈದ್ಯಕೀಯ ಭಾಷೆಯಲ್ಲಿ “ರೂಮ್ಯಾಟಿಕ್‌ ಕಾಯಿಲೆಗಳು” ಎಂದು ಹೇಳುವರು.

2. ನಾಲ್ಕು ವರ್ಗದ ರೂಮ್ಯಾಟಕ್‌ ಕಾಯಿಲೆಗಳು)
ರೂಮ್ಯಾಟಕ್‌ ಕಾಯಿಲೆಗಳಲ್ಲಿ ಸುಮಾರು 200ಕ್ಕಿಂತ ಹೆಚ್ಚು ಕಾಯಿಲೆಗಳಿವೆ. ಅವುಗಳನ್ನು ನಾಲ್ಕು ವರ್ಗಗಳಾಗಿ ಮಾಡಲಾಗಿದೆ. ಅವುಗಳೆಂದರೆ.

(ಎ) ಉರಿ ಊತದ ಸಂಧಿವಾತ: ಕೀಲುಗಳ ಸುತ್ತಲಿರುವ ಪರದೆಯಲ್ಲಿ ಉರಿ ಉಂಟಾಗಿ ಊತ (ಬಾವು) ಬರುವುದು. ಇದರಿಂದ ಕೀಲುಗಳಲ್ಲಿ ನೋವು ಉಂಟಾಗುತ್ತದೆ. ಉಯರಿ ಉಆತದ ಸಂಧಿವಾತದಲ್ಲಿ ಕಂಡುಬರುವ ಪ್ರಮುಖ ಕಾಯಿಲೆ – ರೂಮ್ಯಾಟಾಯ್ಡ್‌ ಅರ್ಥೈರೇಟಿಸ್‌, ಸ್ಟಾಂಡಿಲೋ ಅರ್ಥೈರೇಟಿಸ್‌, ಸೋರಿಯಾಟಿಕ್‌ ಅರ್ಥೈರೇಟಿಸ್‌, ಲ್ಯುಪಸ್‌ ಅರ್ಥೈರೇಟಿಸ್‌, ಗಾಟ್‌ ಅರ್ಥೈರೇಟಿಸ್‌, ಇತ್ಯಾದಿ.

(ಬಿ) ಮೂಳ ಸವೆತ (ಆಸ್ಟಿಯೋ ಅರ್ಥ್ಯರೇಟಿಸ್‌): ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವ ಕಾಯಿಲೆ ಇದಾಗಿದೆ. ಮೂಳೆಸವೆತ ಕ೦ಡು ಬರುವುದು ಕೀಲುಗಳಲ್ಲಿರುವ ಮೃದು ಎಲುಬಿನ ನಷ್ಟದಿಂದ ನಷ್ಟ ಉಂಟಾಗುವುದು ಕೀಲುಗಳಿಗೆ ಪೆಟ್ಟಾದಾಗ, ಅರ್ಥೈರೇಸ್‌ನಿ೦ಂದಮ ತೂಕ ಹೆಚ್ಚಾಗುವಿಕೆ, ಅನುವಂಶಿಕದಿಂದ ಮತ್ತು ಇತ್ಯಾದಿ. ಮೂಳೆ ಸವೆತ ಹೆಚ್ಚಾಗಿ, ಮಂಡಿ, ಕೈ ಬೆರಳು, ಸೊ೦ಟ ಮತ್ತು ಬೆನ್ನಿನಲ್ಲಿ ಕಂಡುಬರುತ್ತದೆ.

(ಸಿ) ಪ್ರಾಂತ್ಯ ಮಾಂಸ ಆಸ್ಥಿಯ ನೋವು: ಎಲ್ಲ ನೋವುಗಳಿಗೆ ಅರ್ಥ್ಯರೇಟಿಸ್‌ ಒಂದೇ ಕಾರಣವಲ್ಲ. ಕೀಲುಗಳ ಸುತ್ತಲಿರುವ ಸ್ನಾಯು, ಅಸ್ಥಿಬ೦ಧನ, ಎಲುಬು ಮತ್ತು ಮಾಂಸದಿಂದ ನೋವು ನೋವು ಉಂಟಾಗುವುದು. ಈ ನೋವು ಸಣ್ಣ ಸಣ್ಣ ಪೆಟ್ಟುಗಳಿಂದ ಅಥವಾ ಹೆಚ್ಚು ಕಲಸದಿಂದ ಬರುತ್ತದೆ. ಈ ನೋವು ಸ್ಪಲ್ಪ ದಿನಗಳವರೆಗೆ ಮಾತ್ರ ಇರುತ್ತದೆ. ಇದಕ್ಕೆ ಉದಾಹರಣೆ ಟೆನಿಸ್‌ ಎಲ್ಟೋ (elbow) ಹಿಮ್ಮಡಿ ನೋವು ಇತ್ಯಾದಿ. ಈ ನೋವು ಕೆಲವರಲ್ಲಿ ದೇಹದ ಎಲ್ಲಾ ಭಾಗಗಳಲ್ಲೂ ಕಂಡುಬರಬಹುದು. ಈ ರೀತಿ ನೋವಿಗೆ ಫೈಬ್ರೂ ಮಯಾಲಿಜಿಯಾ (Fibro myalgia) ಎನ್ನುವರು.

(ಡಿ) ಬೆನ್ನು ನೋವು: ಎಲ್ಲರಲ್ಲೂ ಬೆನ್ನುನೋವು ಕ೦ಡು ಬರುತ್ತದೆ. ಎಷ್ಟೋ ಬಾರಿ ಚಿಕಿತ್ಸೆ ಇಲ್ಲದೇ ಈ ನೋವು ವಾಸಿಯಾಗುತ್ತದೆ. ಈ ನೋವು ಮಾಂಸ, ಎಲುಬು, ಸ್ನಾಯು, ಅಸ್ಥಿಬ೦ಧನ, ಎರಡು ಬೆನ್ನುಹುರಿ ಮಣಿಯ ಮಧ್ಯೆಯಿರುವ ಡಿಸ್ಕ್‌ನಿಂದ ನೋವು ಬರುತ್ತದೆ ( ಈ ಡಿಸ್ಕ್‌ ಜಾರಿ ನರದ ಮೇಲೆ ಒತ್ತಡ ಬಿದ್ದಾಗ ಸೋಂಟದಿಂದ ಪಾದದವರೆಗೆ ನೋವು ಬರುತ್ತದೆ). ಸಣ್ಣ ವಯಸ್ಸಿನಲ್ಲಿ ಬೆನ್ನುನೋವಿಗೆ ಸ್ಟಾಂಡಿಲೋ ಅರ್ಥೈರೀಟಿಸ್‌ ಪ್ರಮುಖ ಕಾರಣ. ದೊಡ್ಡವರಲ್ಲಿ ಕಾಣಿಸಿಕೊಳ್ಳುವ ನೋವು ಸಾಮಾನ್ಯವಾಗಿ ಸ್ಟಾಂಡಿಲೋಸಿಸ್‌
ಮತ್ತು ಆಸ್ತಿಯೋಪೋರೋಸಿಸ್‌ (osteoporosis).

3) ಯಾರಿಗೆ ಸಂಧಿವಾತ ಕಾಯಿಲೆ ಬರುತ್ತದೆ?

ಸಂಧಿತವಾತ ಕಾಯಿಲೆಯು ಯಾರಿಗೆ ಬೇಕಾದರೂ ಬರಬಹುದು. ಅದಕ್ಕೆ ವಯಸ್ಸು ಜಾತಿ, ಲಿಂಗ, ದೇಶದ. ಮಿತಿಯಿಲ.

(ಎ) ರೂಮ್ಯಾಟಾಯಿಡ್‌ ಅರ್ಥೈರೀಟಿಸ್‌:

ಇದು ಸಾಮಾನ್ಯವಾಗಿ 20 ರಿಂದ 30 ವಯಸ್ಸಿನವರಲ್ಲಿ ಕಂಡು ಬರುತ್ತದೆ. ಹೆಚ್ಚಾಗಿ ಹೆ೦ಗಸರಲ್ಲಿ ಕಂಡು ಬರುತ್ತದೆ. ಇದರ ಲಕ್ಷಣಗಳು – ಕೈ ಮತ್ತು ಕಾಲು ಗ೦ಟುಗಳಲ್ಲಿ ಬಾವು: ಬೆಳಿಗ್ಗೆ ಎದ್ದಾಗ ಕೈ ಮತ್ತು ಕಾಲುಗಳನ್ನು ಮಡಚಲು ತೋಮದರೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಚಿಕಿತ್ತೆ ಪಡೆಯದಿದ್ದರೆ ಕೀಲುಗಳು ನಷ್ಟವಾಗಿ ನ್ಯೂನತೆ ಕಂಡು ಬರುತ್ತದೆ; 70% ಜನರಲ್ಲಿ ರೂಮಟಾಯಿಡ್‌ ಫ್ಯಾಕ್ಟರ್‌ (Rheumatoid Factor) ಪಾಸಿಟಿವ್‌ ಇರುವುದು.

(ಬಿ) ಸ್ಟಾಂಡಿಲೋ ಅರ್ಥೈರೀಟಸ್‌:

ಇದು ಹೆಚ್ಚಾಗಿ 20 ರಿ೦ದ 40 ವರ್ಷ ವಯಸ್ಸಿನ ಗಂಡಸರಲ್ಲಲಿ ಕಂಡು ಬರುತ್ತದೆ. ಇದರ ಲಕ್ಷಣಗಳು ಬೆಳಿಗ್ಗೆ ಎದ್ದಾಗ ಸೊ೦ಟ ನೋವು: ಈ ನೋವಿನಿಂದ ಹಾಸಿಗೆಯಿಂದ ಏಳುವುದಕ್ಕೆ ತೊ೦ದರೆಯಾಗುವುದು: ರಾತ್ರಿ ಮಲಗಿದ ಮೇಲೆ ಹಾಸಿಗೆಯಲ್ಲಿ ಹೊರಳಾಟ ಮಾಡಲು ತೊಂದರೆ ಯಾಗುವುದು: ಬೆಳಿಗ್ಗೆ ಎದ್ದಕೂಡಲೇ ಮೊದನೆಯ ಹೆಜ್ಜೆ ಇಡಲು ಹಿಮ್ಮಡಿಯಲ್ಲಿ ನೋವಾಗುವುದು. ಬೆನ್ನುನೋವಿನ ಕೂಡ ಬೇಧಿ ಮತ್ತು ಅಥವಾ ಮಲಬದ್ಧತಯೂ ಇರಬಹುದು: ಸೋ೦ಂಟ ನೋವು ಕೂಡ, ಕಣ್ಣು ಕೆಂಪಾಗಿ ನೋಯುವುದು ಅಥವಾ ಮಂಜಾಗಿ ಕಾಣುವುದು: ಕೈ ಕಾಲು ಗ೦ಟಲುಗಳಲ್ಲಿ ನೋವು ಇರಬಹುದು ಮತ್ತು ಬೆನ್ನು ನೋವಿನ ಕೂಡ ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳಬಹುದು.

(ಸಿ) ಲ್ಯೂಪಸ್‌ ಅರ್ಥೈರೀಟಸ್‌.

ಇದು ಹದಿಹರೆಯದವರಲ್ಲಿ ಹಚ್ಚಾಗಿ ಹೆಣ್ಣು ಮಕ್ಕಳಲ್ಲಿ ಕಂಡು ಬರುತ್ತದೆ. ಇದರ ಲಕ್ಷಣಗಳೆಂದರೆ – ಗಂಟುಗಳ ಬಾವು ಹಾಗು ನೋವು: ಸೂರ್ಯನ ಬಿಸಿಲಿನಲ್ಲಿ ಮುಖ ಮತ್ತು ಚರ್ಮ ಕೆಂಪಾಗಿ, ತುರಿಕೆ, ಉರಿತವಾಗುವುದು: ರಕ್ತಕರ್ಣಗಳ ಕೊರತೆ.

(Haemoglobin, White bood counts ಮತ್ತು Platelets ನ ಕೊರತೆ) ಶರೀರದ ಒಂದು ಭಾಗದಲ್ಲಿ ಶಕ್ತಿ ಕಡಿಮೆಯಾಗುವುದು. Fits ಬರಬಹುದು; ಮೂತ್ರಪಿಂಡದ ತೊಂದರೆ ಆಗುವದು (Creatinine ಹೆಚ್ಚಾಗಿ ಮೂತ್ರ ಕಡಿಮೆಯಾಗುವುದು); ಮತ್ತೇ ಮತ್ತೇ Abortion ಆಗಬಹುದು; ರಕ್ತ ತಪಾಸಣೆಯಲ್ಲಿ ANA, dsdNA test Positive ಇರುವುದು. ಕೆಲವೊಮ್ಮೆ ಇದರಿಂದ ಜೀವಕ್ಕೂ ಅಪಾಯವಾಗಬಹುದು.

(ಡಿ) SCLERODERMA.

ಇದು ಒಂದು Arthritis ಕಾಯಿಲೆ (ಸಂಧಿವಾತ) ಇದರ ಲಕ್ಷಣಗಳು: ಚರ್ಮ ದಪ್ಪಗೆ ಆಗುವದು (ಕೈಯಲ್ಲಿ, ಕಾಲುಗಳಲ್ಲಿ ಮುಖದಲ್ಲಿ ಮುಖದಲ್ಲಿ ಚರ್ಮದಪ್ಪಗಾಗುವುದರಿಂದ ಬಾಯಿ ತೆಗೆಯಲು ತೊಂದರೆಯಾಗುವುದು. ಚಳಿಯಲ್ಲಿ ಅಥವಾ ತಣ್ಣನೆಯ ನೀರಿನಲ್ಲಿ ಕೈ ಮತ್ತು ಕಾಲು ಬೆರಳುಗಳು ನೀಲಿ ಅಥವಾ ಬಿಳಿಯಾಗಿ ಕೈಯಲ್ಲಿ ಹುಣ್ಣು ಆಗುವುದು; ಆಗಾಗ ಉಸಿರಾಟಕ್ಕೆ ತೊಂದರೆಯಾಗುವುದು ಮತ್ತು ಒಣ ಕೆಮ್ಮು ಬರುವುದು ಮತ್ತು ಗ೦ಟುಗಳಲ್ಲಿ ನೋವು ಬರಬಹುದು.

(ಇ) ಗೌಟ್‌ ಅರ್ಥೈರೀಟಸ್‌:

ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ. ಗಂಡಸರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಕಾಯಿಲೆಯ ಲಕ್ಷಣಗಳೆಂದರೆ – ಕಾಲಿನ ಹೆಬ್ಬೆರಳು, ಮಂಡಿ, ಪಾದದ ಕೀಲು ಊದಿ ಕೆಂಪಾಗಿ ನೋವು ಆಗಾಗ್ಗೆ ಕಾಣಿಸಿಕೊಳ್ಳುವುದು.

(ಫ್‌) ಚಿಕ್ಕಮಕ್ಕಳಲ್ಲಿ ಬರುವಂತಹ ಅರ್ಥೈರೀಟಿಸ್‌:

ಅರ್ಥ್ಯರೀಟಿಸ್‌ ಚಿಕ್ಕ ಮಕ್ಕಳಲ್ಲೂ ಬರಬಹುದು. ಇದರ ಲಕ್ಷಣ ಗ೦ಟುಗಳ ಊತ ಮತ್ತು ನೋವು (ಜಿ) ಕೆಲವೊಮ್ಮೆ ರಕ್ತದ ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌, ಇತ್ಯಾದಿ ಕ್ಯಾನ್ಸರ್‌ಗಳಿಂದ ಅರ್ಥ್ಯರೀಟಿಸ್‌ ಬರಬಹುದು.

4) ಅರ್ಥ್ಯರೀಟಿಸ್‌ ಬರಲು ಕಾರಣ:

ಅರ್ಥೈರೀಟಿಸ್‌ ಅನೇಕ ಕಾರಣಗಳಿವೆ. ಅವುಗಳೆಂದರೆ – ಮುಖ್ಯವಾಗಿ ಅನುವಂಶೀಯತೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ಮಾನಸಿಕ ಒತ್ತಡ, ಕೆಲವು ಸಂಸರ್ಗದೊಷ. ಗೌಟ್‌ ಅರ್ಥ್ಯರೀಟಿಸ್‌ ಇರುವವರು, ಮದ್ಯಪಾನ ಮತ್ತು ಮಾಂಸ ಹೆಚ್ಚು ತಿನ್ನುವುದರಿಂದ ಅರ್ಥ್ಯರೀಟಿಸ್‌ ಹೆಚ್ಚಾಗುತ್ತದೆ. ಹೆಚ್ಚು ಹೊತ್ತು ನಿಂತು ಕಲಸ ಮಾಡುವವರಿಗೆ ಬೇಗನೆ ಮೂಳ ಸವೆಯುತ್ತದೆ. ಸ್ಮೀಲೋಡರ್ಮಾ ಅರ್ಥ್ಯರೀಟಿಸ್‌ ಇರುವವರಿಗೆ ಚಳಿಯಲ್ಲಿ ಹೆಚ್ಚಾಗುತ್ತದೆ. ಧೂಮಪಾನದಿಂದ ಅರ್ಥೈರೀಟಸ್‌ ಹೆಚ್ಚಾಗುತ್ತದೆ.

5) ರಕ್ತ ತಪಾಸಣೆ: ಅರ್ಥ್ಯರೀಟಿಸ್‌ ಇದೆ. ಎಂದು ತಿಳಿದುಕೊಳ್ಳಲು ಕಲವು ರಕ್ತ ತಪಾಸಣೆಗಳಿವೆ, ಅವುಗಳೆಂದರೆ – ರೂಮ್ಯಾಟಾಯ್ಡ್‌ ಫ್ಯಾಕ್ಟರ್‌ (Rheumatoid Factor), ANA (Anti Nuclear Antibody)

AntiCCP ANCA ಕಾಯಿಲೆಯ ತೀವ್ರತೆಯನ್ನು ತಿಳಿದುಕೊಳ್ಳಲು ESR, CRP ಎಂಬ ರಕ್ತ ತಪಾಸಣೆಗಳಿವೆ. ಅರ್ಥ್ಯರೀಟಿಸ್‌ ಯಾವುದೇ ಲಕ್ಷಣಗಳಲ್ಲದೇ ಮೇಲ್ಕಂಡ ರಕ್ತ ತಪಾಸಣೆಯಲ್ಲಿ ಹಾಗೆ Positive ಬಂದರೆ ಅದು ಅರ್ಥೈರೀಟಿಸ್‌ ಅಲ್ಲ.

6) ಅರ್ಥೈರೀಟಿಸ್‌ ಚಿಕಿತ್ಸೆ: ಅರ್ಥ್ಯರೀಟಿಸ್‌ ದೀರ್ಫಕಾಲ ಇರುವಂತಹ ಕಾಯಿಲೆ, ಪ್ರಾರಂಭಿಕ ಹಂತದಲ್ಲಿ ಈ ಕಾಯಿಲೆಗಳನ್ನು ಕಂಡುಹಿಡಿದರೆ ಪೂರ್ತಿಯಾಗಿ ಗುಣಪಡಿಸಬಹುದು.

ಮಾತ್ರೆಗಳು:
ಮಾತ್ರೆಗಳಲ್ಲಿ ಹಲವು ಬಗೆಗಳಿವೆ. ಅವುಗಳೆಂದರೆ. – ನೋವನ್ನು ಕಡಿಮೆ ಮಾಡುವ ಮಾತ್ರೆಗಳು, ಕಾಯಿಲೆಯನ್ನು ಗುಣಪಡಿಸುವ ಮಾತ್ರೆಗಳು, ಸ್ಟಿರಾಯ್ಡ್‌ಗಳು.

ನೋವನ್ನು ಕಡಿಮೆ ಮಾಡುವ ಮಾತ್ರೆಗಳು: ಈ ಮಾತ್ರೆಗಳು ಕಾಯಿಲೆಯನ್ನು ಗುಣಪಡಿಸುವ ಮಾತ್ರೆಗಳು, ಸಿರಾಯ್‌ಗಳು.

ನೋವನ್ನು ಕಡಿಮೆ ಮಾಡುವ ಮಾತ್ರೆಗಳು: ಈ ಮಾತ್ರೆಗಳು ನೋವನ್ನು ಕಡಿಮೆ ಮಾಡುತ್ತವಯೇ ಹೊರತು ಕಾಯಿಲೆಯನ್ನು ಗುಣಪಡಿಸುವುದಿಲ್ಲ. ಇವುಗಳನ್ನು ತುಂಬಾ ದಿನ ತೆಗೆದುಕೊಂಡರೆ ಹೂಟ್ಟೆಯಲ್ಲಿ ಹುಣ್ಣಾಗುತ್ತದೆ ಮತ್ತು ಕಿಡ್ನಿ ತೊಂದರೆಯಾಗಬಹುದು.

ಕಾಯಿಲೆಗಳನ್ನು ಗುಣಪಡಿಸುವ ಮಾತ್ರೆಗಳು: ಈ ಮಾತ್ರೆಗಳು ಕಾಯಿಲೆಯನ್ನು ನಿಯಂತ್ರಿಸುತ್ತವೆ. ಇವುಗಳನ್ನು ವೈದ್ಯರ ಸಲಹೆಯ ಮೇರೆಗೆ ದೀರ್ಫ್ಥ ಕಾಲಾವದಿಯವರೆಗೆ ತೆಗೆದುಕೊಳ್ಳಬಹುದು.

ಸ್ಟಿರಾಯ್ಡ್‌ಗಳು: ಈ ಮಾತ್ರೆಗಳು ನೋವನ್ನು ಬೇಗೆ ವಾಸಿ ಮಾಡುತ್ತದೆ. ಇವುಗಳನ್ನು ದೀರ್ಫ ಕಾಲಾವದಿಯವರೆಗೆ ತೆಗೆದುಕೊಂಡರೆ. ಎಲುಬು ಮೆದುವಾಗಿ ಮುರಿಯಬಹುದು. ಹೊಟ್ಟೆಯಲ್ಲಿ
ಹುಣ್ಣಾಗಬಹುದು, ಸಂಸರ್ಗದೋಷ (Infection) ಆಗಬಹುದು. ಇಪ್ಲೆಲ್ಲ ತೊಂದರೆ ಇದ್ದರೂ, ಕೆಲವೊಂದು ಕಾಯಿಲೆಗಳಲ್ಲಿ ಈ ಮಾತ್ರೆ ಕೂಡುವುದರಿಂದ ಜೀವ ಉಳಿಸಬಹುದು ಮತ್ತು ಕಲವೂಂದು ಕಾಯಿಲೆಯಲ್ಲಿ ಈ ಮಾತ್ರೆಗಳನ್ನು ತುಂಬಾ ದಿನ ತೆಗೆದುಕೊಳ್ಳಬೇಕಾಗಬಹುದು.

ಶಸ್ತ್ರಚಿಕಿತ್ಸೆ: ಉರಿ ಊತದ ಸಂಧಿವಾತಕ್ಕೆ ಮಾತ್ರೆಗಳೇ ಚಿಕಿತ್ಸೆ. ಮೂಳಸವೆತ ಮತ್ತು ಉರಿಊತದ ಸಂಧಿವಾತದಲ್ಲಿ ಕೀಲು ಹಾನಿಯಾಗಿ ದಿನನಿತ್ಯದ ಕೆಲಸಕ್ಕೆ ತೊಂದರೆಯಾದಾಗ ಶಸ್ತ್ರಚಿಕಿತ್ಸೆಯನ್ನುಮಾಡುವರು.

ವ್ಯಾಯಾಮ/ಫಿಜಿಯೋಥೆರಪಿ: ವ್ಯಾಯಾಮ ಚಿಕಿತ್ಸೆಯ ಮುಖ್ಯ ಅಂಗ. ವ್ಯಾಯಾಮದಿಂದ ನೋವು ಕಡಿಮೆಯಾಗುತ್ತದೆ. ಪ್ರಾರಂಭದಲ್ಲಿ ನೋವು ಹೆಚ್ಚಾದರೂ ಸ್ವಲ್ಪ ದಿನದ ನಂತರ ನೋವು ಕಡಿಮೆಯಾಗುತ್ತದೆ. ತೂಕ ಕಡಿಮೆಯಾಗಿ ಕೀಲುಗಳ ಮೇಲೆ ಬೀಳುವಂತ ಭಾರ ಕಡಿಮೆಯಾಗುತ್ತದೆ ಮತ್ತು ಕೀಲುಗಳ ಚಾಲನೆ ಹೆಚ್ಚಾಗುತ್ತದೆ.

ಆಹಾರ: ನಮ್ಮ ದೇಹ ನಾವು ತಿನ್ನುವ ಪದಾರ್ಥದಿಂದ ರಚನೆಯಾಗಿದೆ. ಶರೀರದಲ್ಲಿ ಆಗುವ ವಿಕಲ್ಪಗಳಿಗೆ ಆಹಾರವು. ಒ೦ದು. ಕಾರಣವಿರಬಹುದು. ಕೆಲವೊಂದು ಕಾಯಿಲೆಗಳಲ್ಲಿ ಆಹಾರದಿಂದ ಕಾಯಿಲೆ ಹೆಚ್ಚಾಗುವುದು. ಉಪವಾಸದಿಂದ ಸಂಧಿವಾತದ ಲಕ್ಷಣಗಳು ಕಡಿಮೆಯಾಗುವುದು. ಆಹಾರದಲ್ಲಿ ನಿಯಂತ್ರಣ, ಸೂಕ್ತ ಉಪವಾಸ, ಒಳ್ಳಯ ಆಹಾರ (ಶಾಖಾಹಾರಿ ಆಹಾರ ವ್ಯಾಯಾಮ, ಯೋಗ ಇದರ ಕೂಡ ಮಾತ್ರೆಗಳಿಂದ ನಾವು ಕಾಯಿಲೆಯನ್ನು ನಿಯಂತ್ರಿಸಬಹುದು.

kraIndiaRheu2018
Author: kraIndiaRheu2018